ANISIKE

Name:
Location: ಚನ್ನಗಿರಿ, ದಾವಣಗೆರೆ, ಕರ್ನಾಟಕ, India

Monday, September 18, 2006

ಬಯಕೆ


ನಾ ತುಂಬಾ ಕಾದು ಬಯಸಿದ್ದೇನೆ
ನಿನ್ನ ಬೆಚ್ಚಗಿನ ಅಪ್ಪುಗೆಯನ್ನ
ನನ್ನ ತನು ಮನವೆಲ್ಲಾ ಹಸಿದಿದೆಯಿಂದು
ಬಂಧಿಸೆನ್ನ ತನುಮನವನ್ನ
ನಿನ್ನ ತೋಳಿನಲ್ಲಿ

ಇದೆನ್ನ ಹೆಬ್ಬಯಕೆಯೋ
ಅವಶ್ಯಕತೆಯೋ ತಿಳಿಯೆ ನಾ
ದೂರವೆಲ್ಲೂ ಹೋಗಬೇಡ ಗೆಳತಿ
ಈಗಿರುವ ದೂರದಿಂದ ಬೇಸತ್ತು
ಬಯಸುತ್ತಿದ್ದೇನೆ ನಿನ್ನ ಸನಿಹವನ್ನ
--ದೇವರಾಜ್ ಜಿ ಎಸ್

Monday, September 11, 2006

ಭರವಸೆ

ನಾ ಎನು ಭರವಸೆ ಕೊಡಲಿ ನಿನಗೆ
ನಾ ಭರವಸೆ ಕೊಡಲಾರೆ
ನಾವು ಯಾವಾಗಲು ಸೌಖ್ಯವಾಗಿರುವೆವೆಂದು
ಸೌಖ್ಯದಿಂದಲೇ ಬೇಸರ ಮತ್ತು ಅಸೌಖ್ಯದ ಉದಯ

ನಾ ಭರವಸೆ ಕೊಡಲಾರೆ ನಿನಗೆ
ನಿನ್ನೆಲ್ಲಾ ಆಸೆಗಳನ್ನು ಈಡೇರಿಸುವೆನೆಂದು
ಆಸೆಗಳೇ ಆಶಾಭಂಗಕ್ಕೆ ಕಾರಣ

ನಾ ಭರವಸೆ ಕೊಡಲಾರೆ ನಿನಗೆ
ನಮ್ಮ ಜೀವನದಲ್ಲಿ ಯಾವಾಗಲೂ
ಒಳ್ಳೆಯ ಕ್ಷಣಗಳೇ ಇರುವವೆಂದು
ಕಷ್ಟದ ದಿನಗಳಿಂದಲೇ ಸುಖಕ್ಕೆ ಬೆಲೆ ಹೆಚ್ಚು

ನಾ ಭರವಸೆ ಕೊಡಲಾರೆ ನಿನಗೆ
ನಾವು ಯಾವಾಗಲು ಜೊತೆಯಾಗಿರುವೆವೆಂದು
ಆಗಲಿಕೆಯಿಂದಲೇ ಸನಿಹ ಅಷ್ಟೊಂದು ಅಧ್ಬುತ, ಆತ್ಮೀಯ

ಆದಾಗ್ಯೂ ನೀ ಎನ್ನ ಜೊತೆ ಬರುವುದಾದರೆ
ನಮ್ಮ ಪ್ರೀತಿಯನ್ನು ಇವೆಲ್ಲಕ್ಕಿಂತ
ಹೆಚ್ಚು ಆದರಿಸುವುದಾದರೆ
ನಾ ಭರವಸೆ ಕೊಡುವೆ ನಿನಗೆ
ನಮ್ಮ ಜೀವನ ಅತ್ಯಂತ ಸಂತ್ರುಪ್ತವಾಗಿರುವುದೆಂದೂ
ನಮ್ಮ ಜೀವನ ಶಾಶ್ವತ ಸಂಭ್ರಮವಾಗಿರುವೆದೆಂದೂ

ನೀ ಎನ್ನ ತೆಕ್ಕೆಗೆ ಬರುವುದಾದರೆ
ನೀ ಎನ್ನ ಹೃದಯದಲ್ಲಿ ಆಶ್ರಯಿಸುವುದಾದರೆ
ನಾ ಭರವಸೆ ಕೊದುವೆ ನಿನಗೆ
ನಾ ನಿನ್ನ ಕನಸಿನ ರಾಜಕುಮಾರನಾಗುವೆನೆಂದು......
-ದೇವರಾಜ್ ಜಿ ಎಸ್

Thursday, June 01, 2006

My favourite articles

U can find all my favourite articles written by my favourite writers on these two links:

1. Vishweshwara Bhat's articles
http://thatskannada.oneindia.in/column/bhat/index.html

2. Ravi Belagere's Articles
http://thatskannada.oneindia.in/column/ravibelagere/index.html

Wednesday, May 31, 2006

ಹೂನಗೆ

ಹಲವಾರು ವಿಧಗಳುಂಟು ನಗೆಗೆ
ಮುಗುಳ್ನಗೆ, ಕಿರುನಗೆ, ತುಂಟನಗೆ, ಹೂನಗೆ....
ಇದ್ದೊಂದ ಯೋಚನೆ ನನಗೆ
ಇದ್ಯಾವುದೀ ಹೂನಗೆ?
ನಗುವ ಹೂವು ಎಲ್ಲಾದರುಂಟೇ?
ಆ ನಿನ್ನ ನಗೆ
ಪರಿಚಯಿಸಿತೆನಗೆ
ನಗೆಯ ಆ ಬಗೆ
ದರ್ಶನ ಮಾಡಿಸಿತೆನಗೆ
ನಿಜವಾದ ಹೂನಗೆ
ನಿಜ ಹೇಳಲೇನೆ
ನೀನೊಂದು ಹೂವಾಗಿರುವೆ
ನೀನಕ್ಕರದೊಂದು ಹೂನಗೆಯಲ್ಲವೇ?
--ದೇವರಾಜ್ ಜಿ ಎಸ್

Monday, May 22, 2006

ಅನಿರೀಕ್ಷಿತ

ಪರಸ್ಪರ ಪ್ರೀತಿ ಇದ್ದರೂ
ಇದೆಂತ ಪರಿಸ್ಥಿತಿ ಬಂದಿತು?
ಅತೀವವಾಗಿ ಪ್ರೇಮಿಸುವ ಪ್ರೇಮಿಗಳಾದರೂ
ಈ ಮನಸ್ಥಾಪ ಹೇಗಾಯಿತು?
ಜೊತೆಯಲ್ಲಿ ಸಂತಸದಿಂದ ಸಾಗುತ್ತಿರುವಾಗಲೇ
ಈ ಅಂತರ ಹೇಗಾಯಿತು?

ಎನುಗೊತ್ತು ನಾವೆಲ್ಲಿ ಹೋಗುವೆವೋ
ಜನ ಕೇಳಿದರೇನು ಹೇಳುವುದು?
ಎನಾದರೂ ಹೊಳೆಯಬಾರದೆ ಎನಗೆ?
ಕ್ಷಣಾರ್ಧದಲ್ಲಿ, ಬಿದ್ದ
ಗಾಜಿನಂತೆ ಪುಡಿಯಾಯಿತು
ಕೊಟ್ಟೆಲ್ಲಾ ಮಾತುಗಳು

ಹೀಗೀಕೆ ದೂರ ಹೋಗುವೇ
ನನ್ನ ಕನಸುಗಳನ್ನೆಲ್ಲಾ ಚೂರುಮಾಡಿ
ಒಂಟಿತನದ ಕಾಲ ಬಂದಿದೆನಗೆ ಈಗ
ಕಣ್ಣ ಮುಂದೆಲ್ಲಾ ಅಸ್ಥವ್ಯಸ್ಥಗೊಂಡ ಮಾರ್ಗಗಳು


ಸಂತಸದ ಪಯಣದೊಂದಿಗೆ
ಸುಖ್ಹಾಂತ್ಯ ತಲುಪುವೆವು ಅಂದುಕೊಂಡಿದ್ದೆ
ಅದರೀಗ ನಮ್ಮ ಮಾರ್ಗಗಳೇ ಬದಲಾಗಿವೆ
ಕ್ಷಣಾರ್ಧದಲ್ಲೆ ಮರೆಯಾಗಿದೆ ಸಾಂಗತ್ಯ
ಎಲ್ಲಿ ಕಳೆದು ಹೋಯಿತೋ
ನಾವು ಸಾಗಬೇಕೆಂದು ಕೊಂಡಿದ್ದ ಮಾರ್ಗ............

-ದೇವರಾಜ್ ಜಿ ಎಸ್