ANISIKE

Name:
Location: ಚನ್ನಗಿರಿ, ದಾವಣಗೆರೆ, ಕರ್ನಾಟಕ, India

Wednesday, May 31, 2006

ಹೂನಗೆ

ಹಲವಾರು ವಿಧಗಳುಂಟು ನಗೆಗೆ
ಮುಗುಳ್ನಗೆ, ಕಿರುನಗೆ, ತುಂಟನಗೆ, ಹೂನಗೆ....
ಇದ್ದೊಂದ ಯೋಚನೆ ನನಗೆ
ಇದ್ಯಾವುದೀ ಹೂನಗೆ?
ನಗುವ ಹೂವು ಎಲ್ಲಾದರುಂಟೇ?
ಆ ನಿನ್ನ ನಗೆ
ಪರಿಚಯಿಸಿತೆನಗೆ
ನಗೆಯ ಆ ಬಗೆ
ದರ್ಶನ ಮಾಡಿಸಿತೆನಗೆ
ನಿಜವಾದ ಹೂನಗೆ
ನಿಜ ಹೇಳಲೇನೆ
ನೀನೊಂದು ಹೂವಾಗಿರುವೆ
ನೀನಕ್ಕರದೊಂದು ಹೂನಗೆಯಲ್ಲವೇ?
--ದೇವರಾಜ್ ಜಿ ಎಸ್

Monday, May 22, 2006

ಅನಿರೀಕ್ಷಿತ

ಪರಸ್ಪರ ಪ್ರೀತಿ ಇದ್ದರೂ
ಇದೆಂತ ಪರಿಸ್ಥಿತಿ ಬಂದಿತು?
ಅತೀವವಾಗಿ ಪ್ರೇಮಿಸುವ ಪ್ರೇಮಿಗಳಾದರೂ
ಈ ಮನಸ್ಥಾಪ ಹೇಗಾಯಿತು?
ಜೊತೆಯಲ್ಲಿ ಸಂತಸದಿಂದ ಸಾಗುತ್ತಿರುವಾಗಲೇ
ಈ ಅಂತರ ಹೇಗಾಯಿತು?

ಎನುಗೊತ್ತು ನಾವೆಲ್ಲಿ ಹೋಗುವೆವೋ
ಜನ ಕೇಳಿದರೇನು ಹೇಳುವುದು?
ಎನಾದರೂ ಹೊಳೆಯಬಾರದೆ ಎನಗೆ?
ಕ್ಷಣಾರ್ಧದಲ್ಲಿ, ಬಿದ್ದ
ಗಾಜಿನಂತೆ ಪುಡಿಯಾಯಿತು
ಕೊಟ್ಟೆಲ್ಲಾ ಮಾತುಗಳು

ಹೀಗೀಕೆ ದೂರ ಹೋಗುವೇ
ನನ್ನ ಕನಸುಗಳನ್ನೆಲ್ಲಾ ಚೂರುಮಾಡಿ
ಒಂಟಿತನದ ಕಾಲ ಬಂದಿದೆನಗೆ ಈಗ
ಕಣ್ಣ ಮುಂದೆಲ್ಲಾ ಅಸ್ಥವ್ಯಸ್ಥಗೊಂಡ ಮಾರ್ಗಗಳು


ಸಂತಸದ ಪಯಣದೊಂದಿಗೆ
ಸುಖ್ಹಾಂತ್ಯ ತಲುಪುವೆವು ಅಂದುಕೊಂಡಿದ್ದೆ
ಅದರೀಗ ನಮ್ಮ ಮಾರ್ಗಗಳೇ ಬದಲಾಗಿವೆ
ಕ್ಷಣಾರ್ಧದಲ್ಲೆ ಮರೆಯಾಗಿದೆ ಸಾಂಗತ್ಯ
ಎಲ್ಲಿ ಕಳೆದು ಹೋಯಿತೋ
ನಾವು ಸಾಗಬೇಕೆಂದು ಕೊಂಡಿದ್ದ ಮಾರ್ಗ............

-ದೇವರಾಜ್ ಜಿ ಎಸ್